ವಾಲ್ಟರ್ ಮತ್ಥೌ (ಅಕ್ಟೋಬರ್ ೧, ೧೯೨೦ - ಜುಲೈ ೧, ೨೦೦೦) ಹಾಲಿವುಡ್ ಚಿತ್ರರಂಗದ ಒಬ್ಬ ಪ್ರಸಿದ್ಧ ಹಾಸ್ಯನಟ. ಅವರು ಆಡ್ ಕಪಲ್‍ನಲ್ಲಿ ಆಸ್ಕರ್ ಮ್ಯಾಡಿಸನ್‍ನ ತಮ್ಮ ಪಾತ್ರಕ್ಕಾಗಿ ಮತ್ತು ಆಡ್ ಕಪಲ್‍ನ ತಾರೆ ಜ್ಯಾಕ್ ಲೆಮನ್‍ರೊಂದಿಗೆ ತಮ್ಮ ಆಗಾಗ್ಗಿನ ಸಹಯೋಗಗಳಿಗಾಗಿ, ಜೊತೆಗೆ ೧೯೭೬ರ ಹಾಸ್ಯಪ್ರಧಾನ ಚಿತ್ರ ದ ಬ್ಯಾಡ್ ನ್ಯೂಸ್ ಬೇರ್ಸ್‍ನಲ್ಲಿ ಕೋಚ್ ಬಟರ್‍ಮೇಕರ್ ಆಗಿ ತಮ್ಮ ಪಾತ್ರಕ್ಕಾಗಿ ಸುಪರಿಚಿತರಾಗಿದ್ದಾರೆ. ಅವರು ೧೯೬೬ರ ಬಿಲಿ ವೈಲ್ಡರ್‍ರ ಚಿತ್ರ ದ ಫ಼ಾರ್ಚ್ಯೂನ್ ಕುಕಿಯ ತಮ್ಮ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ಅಕ್ಯಾಡೆಮಿ ಪ್ರಶಸ್ತಿ ಗೆದ್ದರು.